Online Centre Yadgir

Random Posts

Breaking

Wednesday, January 11, 2023

How to Apply Labour Card - ಲೇಬರ್ ಕಾರ್ಡ್ ಹೇಗೆ ಅಪ್ಪ್ಲೈ ಮಾಡುವುದು

Ho to apply  Labour Card - ಲೇಬರ್ (ಕಾರ್ಮಿಕರ) ಕಾರ್ಡ್ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹಾಗು ಅರ್ಜಿ ಸಲ್ಲಿಸುವ ವಿಧಾನ 

        

  


     ಲೇಬರ್‌ ಕಾರ್ಡ್‌ ಇದು ರ್ನಾಟಕ ರಾಜ್ಯ ಸರಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ  ಕಲ್ಯಾಣ ಮಂಡಳಿಯವರು  ಕಾರ್ಮಿಕರಿಗೆ ನೀಡುವ ಒಂದು ಗುರಿತಿನ ಚೀಟಿ. ಲೇಬರ್‌ ಕಾರ್ಡ್‌ ಹೊಂದಿದ ಕಾರ್ಮಿಕರಿಗೆ ಕರ್ನಾಟಕ ಲೇಬರ್‌ ಇಲಾಖೆಯಿಂದ ತುಂಬಾ ಸೌಲಬ್ಯಗಳು ದೊರೆಯುತವೆ. ಆದರೆ ಲೇಬರ್‌ ಕಾರ್ಡ್‌ ಪಡೆಯಲು ನೀವು ಕರ್ನಾಟಕ ಲೇಬರ್‌ ಇಲಾಖೆಗೆ ಸೇವಾ ಸಿಂದುವಿನಲ್ಲಿ ಆನ್ಲೈನ್‌ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಹಾಗಾದರೆ ನಾವು ಇವಾಗ ಲೇಬರ್ ಕಾರ್ಡ್‌ ಗೆ ಅರ್ಜಿ ಸಲ್ಲಿಸಲು ಬೇಕಾಗುವ ಧಾಖಲಾತಿಗಳು ಯಾವುವು ಯಾವಯಾ ದಾಖಲಾತಿಗಳನ್ನು ಸಿದ್ದಪಡಿಸಿಕೊಳ್ಳಬೇಕೆಂದು ತಿಳಿದುಕೊಳ್ಳೋಣ.







ಲೇಬರ್‌ ಕಾರ್ಡ್‌ ಅರ್ಜಿ ಸಲ್ಲಿಸಲು ಬೇಕಾಗುವ ಧಾಖಲಾತಿಗಳು ಈ ಕೆಳಗಿನಂತಿವೆ. 

Documents required to Apply Labour card.


1.  ದೃಡೀಕರಣಪತ್ರ  (ಉದ್ಯೋಗ ಮಾಡುತ್ತಿರುವ ದೃಢೀಕರಣ ಪತ್ರ) ಕೆಲಸ ಮಾಡುತ್ತಿರುವ ಕಾಂಟ್ರ್ಯಾಂಕ್ಟರ್‌ ಕಡೆಯಿಂದ ಅಥವಾ ಗ್ರಾಮ ಪಂಚಾಯಾತಿಯಿಂದ ಉದ್ಯೋಗ ದೃಢಿಕರಣ ಪತ್ರ ಅಥವಾ ಲೇಬರ್‌ ಆಫಿಸರ್‌ ಇವರುಗಳಿಂದ ಪಡೆದಿರಬೇಕು
2. ಆಧಾರ್  ಕಾರ್ಡ್  ನಕಲಿ ಪ್ರತಿ 
4. ರೇಷನ್ಕಾರ್ಡ್  (ಕಡ್ಡಾಯವಲ್ಲ)
5. ಬ್ಯಾಂಕ್‌ ಪಾಸ್‌ ಬುಕ್‌

6. ಪಾಸ್‌ ಪೋರ್ಟ್‌ ಅಳೆತಯ ಒಂದು ಭಾವಚಿತ್ರ. 

ಈ ಮೇಲಿನ ಎಲ್ಲಾ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡರೆ ಸಾಕು ನೀವು ಲೇಬರ್‌ ಕಾರ್ಡ್‌ ಗೆ ಅರ್ಜಿ ಸಲ್ಲಿಸಬಹುದು. 


ಕಾರ್ಮಿಕ ಕಾರ್ಡ್‌ (ಲೇಬರ್ ಕಾರ್ಡ)ಗೆ ಅರ್ಜಿ ಸಲ್ಲಿಸುವ ವಿಧಾನ


ಸೇವಾ ಸಿಂದು ಆಫಿಶಿಯಲ್‌ ವೆಬಸೈಟ್‌ ಗೆ ಹೋಗಿ ಸೇವ ಸಿಂದುವಿನಲ್ಲಿ ನಿಮ್ಮ  ಹೆಸರನ್ನು ನಿಮ್ಮ ಮೊಬೈಲ್‌ ನಂಬರ ಹಾಗು ಆಧಾರ್‌ ಕಾರ್ಡ ಸಾಹಾಯದಿಂದ ಒಂದು ಅಕೌಂಟನ್ನು ರೆಜಿಸ್ಟ್ರೇಷನ್‌ ಮಾಡಿಕೊಳ್ಳಬೇಕು ಇದಕ್ಕೆ ನಿಮ್ಮ ಆಧಾರ್‌ ಕಾರ್ಡ್ ಗೆ ನಿಮ್ಮ ಮೊಬೈಲ್‌ ನಂಬರ ಕಡ್ಡಾಯವಾಗಿ ಜೋಡಣೆ ಮಾಡಿಸಿರಬೇಕು ರೆಜಿಸ್ಷೇಶನ ಸಮಯದಲ್ಲಿ ಹಾಗು ಅರ್ಜಿ ಹಾಕುವ ಕೊನೆಯ ಹಂತದಲ್ಲಿ ನಿಮ್ಮ ಆಧಾರ್‌ ಕಾರ್ಡಗೆ ಲಿಂಕ ಆದ ಮೊಬೈಲ್‌ ನಂಬರಿಗೆ ಒ.ಟಿ. ಪಿ. ಬರುತ್ತದೆ. ಆದಾರ್‌ ಕರ್ಡಗೆ ಮೊಬೈಲ್‌ ನಂಬರ ಇಲ್ಲಾವಾದಲ್ಲಿ  ಈಗಲೆ ಆಧಾರ್ ಕೇಂದ್ರಕ್ಕೆ ಬೇಟಿನೀಡಿ ನಿಮ್ಮ ಆಧಾರ್‌ ಗೆ ಮೊಬೈಲ ನಂಬರನ್ನು ಲಿಂಕ ಮಾಡಿಸಿ ತದನಂತ ಅರ್ಜಿಯನ್ನು ಸಲ್ಲಿಸಿ






ಸೇವಾ ಸಿಂದುವಿನಲ್ಲಿ ಅಕೌಂಟ ಕ್ರಿಯೇಟ್‌ ಮಾಡಿದ ಮೇಲೆ ನಿವು ನೀಡಿರುವ ಮೊಬೈಲ್ ನಂಬರ ಹಾಗು ಪಾಸ್ ವರ್ಡ ಅನ್ನು ಹಾಕಿ ಸೇವ ಸಿಂದುವಿಗೆ ಲಾಗಿ ಆಗಿ ಅಲ್ಲಿ ನಿಮಗೆ Apply For service section     view all available service section ಗೆ  ಹೋಗಿ ಅಲ್ಲಿ Application for Registration with Karnataka Building and Other Construction Workers Welfare Board ಅಂತ ಒಂದು ಲಿಂಕ ಬರುತ್ತೆ ಅದರ ಮೇಲೆ ಕ್ಲಿಕ್‌ ಮಾಡಿದರೆ ನಿಮಗೆ ಉದ್ಯೋಗ ಪ್ರಮಾಣ ಪತ್ರ ಕೂಡ ಡೌನ್ಲೊಡ್‌ ಮಾಡಿಕೊಳ್ಳಲು ಕೊಟ್ಟಿರುತ್ತಾರೆ. ನಿಮ್ಮ ಬಳಿ ಉದ್ಯೋಗ ಪ್ರಮಾಣ ಪತ್ರ ಇಲ್ಲದಿದ್ದಲ್ಲಿ ಅದನ್ನು ಡೌನ್ಲೋಡ್‌ ಮಾಡಿಕೊಳ್ಳಿ

ನಂತರ ಅರ್ಜಿ ನಮೂನೆ ಒಪನ್‌ ಆಗುತ್ತೆ ಅಲ್ಲಿ ನಿಮ್ಮ ವಿವರಗಳನ್ನು ತುಂಬಿ ನಂತರ ಸರಿಯಾದ ದಾಖಲಾತಿಗಳನ್ನು ಲಗತ್ತಿಸಿ ಹಾಗು ಇ-ಸೈನ್‌ ಮಾಡಿ ಅರ್ಜಿಯನ್ನು ಸಲ್ಲಿಸಿ. 






ಅರ್ಜಿ ಸಲ್ಲಿಸಿದ ನಂತರ ಸಕಾಲ ಸಂಖ್ಯೆ ನಿಮ್ಮ ಮೊಬೈಲ್‌ ನಂಬರಿಗೆ ಎಸ್. ಎಂ. ಎಸ್‌ ಬರುತ್ತದೆ ಹಾಗು ಅರ್ಜಿ ಸಲ್ಲಿಸಿದ ರಿಸಿಪ್ಟ್‌ ಕುಡಾ ಬರುತ್ತದೆ ನೆನಪಿರಲಿ ಇದರ ಸೇವಾ ಶುಲ್ಕ  0 ರೂ ಅಂದರೆ ನಿಮಗೆ ಅರ್ಜಿ ಸಲ್ಲಿಸಲು ಯಾವುದೇ ತರಹದ ಶುಲ್ಕ ಇರುವದಿಲ್ಲ

ಅರ್ಜಿ ಸಲ್ಲಿಸಿದ 40 ದಿನಗಳ ನಂತರ ನೀವು ಪುನಃ ಸೇವಾ ಸಿಂದು ಗೆ ರೆಜಿಸ್ಟರ್‌ ಮಾಡಿದ ನಂಬರಿಂದ ಲಾಗಿನ್‌ ಮಾಡಿ ಅರ್ಜಿ ಸ್ಥತಿಯನ್ನು ಚೆಕ್‌ ಮಾಡಬಹುದು ಅರ್ಜಿ ಅನುಮೋದನೆ (ಅಪ್ರೂವ್)‌ ಆದಲ್ಲಿ ನೀವು ಲೇಬರ್‌ ಕಾರ್ಡ್‌ ನ್ನು ಡೌನ್ಲೋಡ್‌ ಮಾಡಬಹುದು 




Thank you for visiting our website 




No comments:

Post a Comment